Saturday, 1 August 2020

ಪುಲಿಕೇಶಿ ದಮ್ಮೂರು, ರಸಪ್ರಶ್ನೆಗಳು (asgnmnt---೮



ಮಕ್ಕಳಲ್ಲಿ ಕಲಿಕೆಯು ದೃಢ ವಾಗಬೇಕಾದರೆ ಪಠ್ಯ ವಿಷಯದ ಬೋಧನೆಯ ಜೊತೆಗೆ ಸಹಪಠ್ಯ ಚಟುವಟಿಕೆಗಳು  ಮಹತ್ವದ ಸ್ಥಾನವನ್ನು ವಹಿಸುತ್ತದೆ. ಅದರಂತೆ ರಸಪ್ರಶ್ನೆಗಳು ಸಹ ಮಕ್ಕಳಲ್ಲಿ ಕಲಿಕೆಯನ್ನು ಸದೃಢಗೊಳಿಸುವಲ್ಲಿ ಸಹಾಯ ಮಾಡುತ್ತದೆ.

ಕನ್ನಡ --ಒಂದನೇ ತರಗತಿ


೧) ರ ಗ ಸ_ _ಪೂರ್ತಿಗೊಳಿಸಿ.
೨) ಆನೆಗೆ ಇರುವ ಇನ್ನೊಂದು ಹೆಸರು.
೩) ಈ ಅಕ್ಷರಗಳಿಂದ ಪ್ರಾರಂಭವಾಗುವ ಪದಗಳನ್ನು ಬರೆ
     ಜ___.   ಸ___. ಗ___
     ತ___. ನ_____. ಮ__
೪) ನಮ್ಮ ನಾಡ ಹಬ್ಬ ಯಾವುದು?
೫) ಈ ಕೆಳಗಿನ ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ.
    **ದಸರಾ ಅರಸರ
*. **ಮರ ವನದ
    

ಕನ್ನಡ ಎರಡನೇ ತರಗತಿ


೧) ಹೊಲದಲ್ಲಿ ದುಡಿಯುವವರಿಗೆ ಏನೆನ್ನುವರು?
೨) ಗುಂಪಿಗೆ ಸೇರದ ಅಕ್ಷರ ಗುರುತಿಸಿ
   ** ರಾ, ಜಾ, ನ, ಲಾ.
    **ಗಿ, ಮಿ, ಲೆ, ಸಿ
   **ಕು, ಚು, ಡು, ಕೂ
೩) ಕೆಳಗಿನ ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ
    **ಅಜ್ಜಿ ತಿಂದಳು ಕಜ್ಜಾಯ.
    **ಅಣ್ಣನು ಮಾಡಿದ ಗಾಳಿಪಟ ಬಣ್ಣದ
   **ಹೋಗುವನು ಶಾಲೆಗೆ ಪ್ರಜ್ವಲ್.
೪) ಈ ಕೆಳಗಿನ ಒತ್ತಕ್ಷರಗಳಿಗೆ ಪದಗಳನ್ನು ರಚಿಸಿ
     ಕ್ಕ,,, ನ್ನ,, ಲ್ಲ,, ಸ್ಸ,,, ದ್ದ,, ಬ್ಬ.

ಮೂರನೆಯ ತರಗತಿ __ಕನ್ನಡ


೧) ಬಾವಿಯಲ್ಲಿ ಯಾರ ಪ್ರತಿಬಿಂಬ ಕಾಣಿಸಿತು?
೨) ಚಂದ್ರನನ್ನು ಮೇಲೆಕ್ಕೆ ಏರಿಸಿದವರು ಯಾರು?
೩) ಚಂದ್ರನಿಗೆ ಇರುವ ಇನ್ನೊಂದು ಹೆಸರು ಏನು?
೪) ಇರುಳು ಈ ಪದದ ಸಮನಾರ್ಥಕ ಪದ ಯಾವುದು?
೫) ಲಗೋರಿ ಆಡಲು ಎಷ್ಟು ಗುಂಪು ಬೇಕು?
೬) ಮನೆಗೆ ಯಾರು ಚೆಂದ?
೭) ಸಂತೆ ಎಲ್ಲಿ ನೆರೆದಿತ್ತು?
೮) ಬೊಂಬೆ ತಯಾರಿಕರು ಎಷ್ಟು ಬೊಂಬೆ ತಂದಿದ್ದನು?
೯)ಕಿತ್ತೂರು ರಾಣಿ ಚೆನ್ನಮ್ಮನ ತಂದೆ-ತಾಯಿಯ ಹೆಸರು ಏನು?
೧೦) ತಾಯಿ ಮಗುವಿಗೆ ಎಂತಹ ಕಡಗ ತೊಡಿಸಿದ್ದಾಳೆ?


ಪರಿಸರ ಒಂದನೇ ತರಗತಿ


೧) ನಿನ್ನ ಅಪ್ಪನ ಅಪ್ಪ ನಿನಗೆ ಏನಾಗಬೇಕು?
೨) ನಿನ್ನ ಅಜ್ಜ ಅಜ್ಜಿಗೆ ನೀನು ಏನಾಗಬೇಕು?
೩) ನಿಮಗೆ ಆಹಾರ ಏಕೆ ಬೇಕು?
೪) ಪ್ರತಿದಿನ ಎಷ್ಟು ಬಾರಿ ಹಲ್ಲುಜ್ಜಬೇಕು?
೫) ನೀರಿನಲ್ಲಿ ಚಲಿಸುವ ವಾಹನಗಳು ಯಾವುವು?
೬) ಆಕಾಶದಲ್ಲಿ ಚಲಿಸುವ ವಾಹನಗಳು ಯಾವುವು?
೭) ನಿನಗೆ ಗೊತ್ತಿರುವ ಹಬ್ಬಗಳ ಹೆಸರನ್ನು ಹೇಳಿ?
೮) ನಿನಗೆ ತಿಳಿದಿರುವ ಸಸ್ಯಗಳ ಹೆಸರುಗಳನ್ನು ಹೇಳಿ?
೯) ನೀನು ನಡೆದಾಡಲು ಸಹಾಯ ಮಾಡುವ ಅಂಗ ಯಾವುದು?
೧೦) ನಿನಗೆ ಇಷ್ಟವಾದ ಒಂದು ಸಿಹಿತಿಂಡಿಯನ್ನು ಹೇಳು.

ಪರಿಸರ ಎರಡನೇ ತರಗತಿ


೧)ನಿನಗೆ ಮನೆಯಲ್ಲಿ ಯಾರು ಅಡಿಗೆ ಮಾಡಿ ಕೊಡುತ್ತಾರೆ?
೨) ನಿನಗೆ ತಿಳಿದಿರುವ 5 ಪ್ರಾಣಿಗಳ ಹೆಸರನ್ನು ಹೇಳು?
೩) ನಿನಗೆ ತಿಳಿದಿರುವ ಐದು ಪಕ್ಷಿಗಳ ಹೆಸರನ್ನು ಹೇಳಿ?
೪) ನಿನಗೆ ಗೊತ್ತಿರುವ ಐದು ತರಕಾರಿಗಳ ಹೆಸರನ್ನು ಹೇಳಿ?
೫) ನಿನ್ನ ಮನೆಯಲ್ಲಿ ಹಬ್ಬದ ದಿವಸ ಯಾವ್ಯಾವ ಅಡುಗೆಗಳನ್ನು ಮಾಡುವರು?
೬) ನಿನ್ನ ಮನೆಯಲ್ಲಿ ನಿನಗೆ ಯಾರು ಕಥೆ ಹೇಳುವರು?
೭) ಅವಸರದಲ್ಲಿ ರಸ್ತೆಯನ್ನು ದಾಟಬಾರದು ಏಕೆ?
೮) ಮನೆಯಲ್ಲಿ ಸಾಕುವ ಪ್ರಾಣಿಗಳು ಯಾವುವು?
೯) ನಿನ್ನ ಸ್ನೇಹಿತರಿಗೆ ನೀನು ಹೇಗೆ ಸಹಾಯ ಮಾಡುವೆ?
೧೦) ನೀನು ಮನೆಯಲ್ಲಿ ಯಾವ್ಯಾವ ಕೆಲಸಗಳನ್ನು ಮಾಡುವೆ?

ಪರಿಸರ ಮೂರನೇ ತರಗತಿ


೧) ಕಾಲಗಳು ಎಷ್ಟು ಯಾವುವು?
೨) ಕುಟುಂಬದಲ್ಲಿ ಎಷ್ಟು ವಿಧಗಳಿವೆ?
೩) ವಿಭಕ್ತ ಕುಟುಂಬ ಎಂದರೇನು?
೪) ನಿನಗೆ ಗೊತ್ತಿರುವ ಐದು ಸಸ್ಯಹಾರಿ ಪ್ರಾಣಿಗಳನ್ನು ಹೆಸರಿಸಿ?
೫) ನಿನಗೆ ಗೊತ್ತಿರುವ ಐದು ಮಾಂಸಾಹಾರಿ ಪ್ರಾಣಿಗಳ ಹೆಸರು ಹೇಳಿ?
೬) ಮನೆಯ ವಿಧಗಳನ್ನು ಹೆಸರಿಸಿ?
೭) ಪಕ್ಕ ಮನೆ ಯಾವ ಸಾಮಗ್ರಿಗಳಿಂದ ಕಟ್ಟಿರುತ್ತಾರೆ.
೮) ಆಟಗಳು ವಿಧಗಳು ಯಾವುವು?
೯) ಜ್ಞಾನೇಂದ್ರ ಗಳನ್ನು ಹೆಸರಿಸಿ?
೧೦) ಅತ್ಯಂತ ವೇಗವಾಗಿ ಓಡುವ ಪ್ರಾಣಿ ಯಾವುದು?
೧೧)  ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ?
೧೨) ಹಲ್ಲುಗಳ ವಿಧಗಳನ್ನು ಹೆಸರಿಸಿ?
೧೩) ದವಡೆ ಹಲ್ಲು ಯಾವುದಕ್ಕೆ ಸಹಾಯಕವಾಗಿದೆ.?
೧೪) ಎಲೆಗಳು ಹೆಚ್ಚಾಗಿ ಯಾವ ಸಮಯದಲ್ಲಿ ಉದುರುತ್ತವೆ.
೧೫) ಹಿಂದಿನ ಕಾಲದಲ್ಲಿ ಧಾನ್ಯಗಳನ್ನು ಯಾವುದರಲ್ಲಿ ಸಂಗ್ರಹಿಸಿಡುತ್ತಿದ್ದರು.

ಗಣಿತ 1ನೇ ತರಗತಿ


೧) ಕೆಳಗಿನ ಅಂಕಿಗಳನ್ನು ಕೂಡಿಸು.
    **4+1.        2+1.       3+1.      
        1+1.        2+2.       3+2
೨) ಈ ಕೆಳಗಿನ ಸಂಖ್ಯೆಗಳ ಹಿಂದಿನ ಸಂಖ್ಯೆ ಬರೆಯಿರಿ
       ----4 ,.     -----2,.      ----3,.      ----5
೩) ಈ ಕೆಳಗಿನ ಸಂಖ್ಯೆಗಳಲ್ಲಿ ಕಳೆಯಿರಿ.
      4-2,.     5---2,.       3---2,.     6---3
೪) ಈ ಕೆಳಗಿನ ಸಂಖ್ಯೆಗಳ ಮುಂದಿನ ಸಂಖ್ಯೆ ಬರೆಯಿರಿ .
     2---,.    5-----,.      6-----,.     8-----,
೫) ಒಂದು ವಾರದಲ್ಲಿ ಎಷ್ಟು ದಿನಗಳು ಬರುತ್ತವೆ?
೬) ಪೃಥ್ವಿರಾಜ್ ಹತ್ತಿರ 5 ಗೋಲಿ ಗಳಿದ್ದವು ಅದರಲ್ಲಿ ಮೂರು ಗೋಲಿಗಳು ಕಳೆದವು ಆಗ ಅವನಲ್ಲಿ ಉಳಿದ ಗೋಲಿಗಳು ಎಷ್ಟು.?
೭) ಪ್ರಜ್ವಲ್ ಹತ್ತಿರ ಎರಡು ಚಾಕ್ಲೆಟ್ ಇದ್ದವು ಅವನ ಅಣ್ಣ ನಾಲ್ಕು ಚಾಕ್ಲೇಟ್ ಗಳನ್ನು  ಕೊಟ್ಟನು ಈಗ ಅವನ ಹತ್ತಿರ ಇರುವ ಚಾಕ್ಲೆಟ್ ಎಷ್ಟು?
೮) ಈ ಕೆಳಗಿನ ಸಂಖ್ಯೆಗಳಲ್ಲಿ ಗರಿಷ್ಠ ಸಂಖ್ಯೆ ಯಾವುದು?
      5.        8.        2.         6.      1
೯) ಒಂದರಿಂದ ಹತ್ತರವರೆಗೆ ಅಂಕಿಗಳನ್ನು ಹೇಳಿ.
೧೦) rs.10 ಆಗಲು ಒಂದು ರೂಪಾಯಿ ಎಷ್ಟು ನಾಣ್ಯಗಳು?

ಗಣಿತ 2ನೇ ತರಗತಿ


೧) 48 ಇದರಲ್ಲಿ 4 ರ ಸ್ಥಾನಬೆಲೆ ಏನು?
೨)25 ಇದನ್ನು ಬಿಡಿಸಿ ಬರೆ.
೩)4 ರ ಮಗ್ಗಿ ಹೇಳಿ?
೪) ಕೆಳಗಿನ ಸಂಖ್ಯೆಗಳಲ್ಲಿ ಸರಿ ಸಂಖ್ಯೆಗಳನ್ನು ಗುರುತಿಸಿ
       33,32,56,48,41,95,46,5,75,74
೫) ಕೆಳಗಿನ ಸಂಖ್ಯೆಗಳಲ್ಲಿ ಬೆಸ ಸಂಖ್ಯೆಗಳನ್ನು ಗುರುತಿಸಿ.
       22,41,86,85,31,36,38,35,85,53
೬)4*2 ಇದರ ಬೆಲೆ ಏನು?
೭) ಕೆಳಗಿನ ಸಂಖ್ಯೆ ಗಳನ್ನು ಸಂಕಲನ ಮಾಡಿ
     36+25       28+36.    42+42.   56+08
೮) ಕೆಳಗಿನ ಸಂಖ್ಯೆಗಳನ್ನು ವ್ಯವಕಲನ ಮಾಡಿ.
     25--16.      86--17,.       44--22,.   75-49

೯)ಈ ಸಂಖ್ಯೆಗಳು ಹಿಂದಿನ ಸಂಖ್ಯೆ ಬರೆಯಿರಿ
     ---45,.     ----73,.     ----50,.      -----82
೧೦) ಈ ಸಂಖ್ಯೆಗಳ ಮುಂದಿನ ಸಂಖ್ಯೆ ಬರೆಯಿರಿ.
      72----,,   43---,   81----,   26----,   33----

ಗಣಿತ ಮೂರನೇ ತರಗತಿ


೧)101 ರಿಂದ 230 ರ ವರಗೆ ಸಂಖ್ಯೆ ಹೇಳು.
೨)175&256 ಇದರಲ್ಲಿ ದೊಡ್ಡ ಸಂಖ್ಯೆ ಯಾವುದು?
೩)250&181 ಇದರಲ್ಲಿ ಚಿಕ್ಕ ಸಂಖ್ಯೆ ಯಾವುದು?
೪)152 ಈ ಸಂಖ್ಯೆಯನ್ನು ವಿಸ್ತರಿಸಿ ಬರೆಯಿರಿ?
೫)8*6 ಇದರ ಗುಣಲಬ್ದ ಏನು?
೬) ವಾರದ ಮೊದಲ ದಿನ ಯಾವುದು?
೭) ಕನ್ನಡ ಮಾಸಗಳನ್ನು ಹೇಳಿ?
೮) ಪವಿತ್ರಾಳ ಹತ್ತಿರ 25 ಹಣ್ಣುಗಳಿದ್ದರೆ ಪ್ರತಿಯೊಬ್ಬರು 5 ಹಣ್ಣುಗಳನ್ನು ಹಂಚಿಕೊಂಡರೆ ಎಷ್ಟು ಜನ ಹಂಚಿಕೊಳ್ಳಬಹುದು?
೯) ಒಂದು ಕಿಲೋ ಮೀಟರ್ ಅಂದರೆ ಎಷ್ಟು ಮೀಟರ್
೧೦) ಒಂದೇ ಲೀಟರಿಗೆ ಎಷ್ಟು ಮಿಲಿ ಲೀಟರ್?
೧೧) ಒಂದು ರೂಪಾಯಿಗೆ ಎಷ್ಟು ಪೈಸೆಗಳು  ಇರುತ್ತವೆ.
೧೨) ಒಂದು ದಿನಕ್ಕೆ ಎಷ್ಟು ಗಂಟೆಗಳು?
೧೩)634 ಇದರಲ್ಲಿ ಆರರ ಸ್ಥಾನ ಬೆಲೆ ಎಷ್ಟು?
೧೪)123,165,453,213,412,531 ಇದರಲ್ಲಿ ಗರಿಷ್ಠ ಸಂಖ್ಯೆ ಯಾವುದು?
೧೫)153,82,321,418,462,351 ಇದರಲ್ಲಿ ಕನಿಷ್ಠ ಸಂಖ್ಯೆ ಯಾವುದು?.

No comments:

VENKATESH KATWA ALL ASSIGHNMENT